ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘಕ್ಕೆ ೧೩ಲಕ್ಷ ನಿವ್ವಳ ಲಾಭ

ತುಮಕೂರು: ಕಳೆದ ೨೬ ವರ್ಷಗಳಿಂದ ಸದಸ್ಯರ ಆರ್ಥಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದಿರುವ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧೩.೭೨ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿ ಅಧ್ಯಕ್ಷ ರಾದ ಬಿ. ವಿ. ಗಂಗರಾಜಚಾರ್ ತಿಳಿಸಿದರು.

ಅವರು ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಮಕೂರು ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಶ್ವಕರ್ಮ ಸಮುದಾಯದವರಿಗೆ ಆರ್ಥಿಕ ಸಾಲ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ೧೯೯೮-೯೯ರಲ್ಲಿ ಹಿರಿಯ ಪ್ರವರ್ತಕರುಗಳ ದೂರದೃಷ್ಟಿ ಯಿಂದ ಸ್ಥಾಪನೆಯಾದ ಶ್ರೀ ಕಾಳಿಕಾಂಬ ಪತ್ತಿನ ಸಹಕಾರಿ ಸಂಘ ಪ್ರಸಕ್ತ ೨೬ ವರ್ಷಗಳ ಸಾರ್ಥಕ ಮುನ್ನಡೆ ಸಾಧಿಸುತ್ತಿದೆ. ಪ್ರಸಕ್ತ ಸಂಘದಲ್ಲಿ ೩.೬೯ಕೋಟಿ ಠೇವಣಿಯಿದ್ದು, ೧೩೦೦ಕ್ಕೂ ಅಧಿಕ ಷೇರುದಾರ ಸದಸ್ಯ ರನ್ನು ಹೊಂದುವ ಮೂಲಕ ವಾರ್ಷಿಕ ೨೬.೨೬ಕೋಟಿ ವಹಿವಾಟು ನಡೆಸಲಾಗುತ್ತಿದೆ ಎಂದರು.

ಪ್ರತಿ ವರ್ಷ ದಂತೆ ಈ ವರ್ಷ ವೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ. ಸದಸ್ಯರಿಗೆ ಶೇ. ೧೦ರಷ್ಟು ಡಿವಿಡೆಂಡ್ ಸಹ ಘೋಷಿಸಲಾಗಿದೆ ಎಂದರು. ವಾರ್ಷಿಕ ಲೆಕ್ಕ ಪತ್ರ, ಜಮಾಖರ್ಚನ್ನು ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಯಿತು.

ಸಂಘದ ಉಪಾಧ್ಯಕ್ಷರಾದ ಕೆ.ವಿ. ಗೋವರ್ಧನಚಾರ್ ಮಾತನಾಡಿ, ನಮ್ಮಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರು ಸರ್ವ ಸದಸ್ಯರ ಸಲಹೆ ಪಡೆದುಹಾಗೂ ಬೈಲಾ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳು ಇನ್ನೂ ಉನ್ನತ ವಿದ್ಯಾಭ್ಯಾಸ ಮಾಡಿ ತಂದೆ-ತಾಯಿ ಹಾಗೂ ಓದಿದ ವಿದ್ಯಾ ಸಂಸ್ಥೆಗೆ ಕೀರ್ತಿತರಬೇಕು. ಉನ್ನತ ಅಧಿಕಾರಕ್ಕೇರಿ ಬಡವರಿಗೆಸಹಾಯ ಮಾಡುವಂತ ಮನೋಭಾವ ಬೆಳೆಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ನಿರ್ದೇಶಕ ರುಗಳಾದ ಟಿ. ಪಿ. ವೇಣುಗೋಪಾಲ ಚಾರ್, ಟಿ.ಎ. ಸುಧೀರ್, ಸಿ. ರಾಮಲಿಂಗಚಾರ್, ಜೆ. ಎನ್. ಗೋಪಾಲಕೃಷ್ಣ ಚಾರ್, ಟಿ. ಸಿ. ಢಮರುಗೇಶ್, ವೈ. ಎಸ್. ನಾಗರತ್ನ, ವಿ. ಈಶ್ವರಿ, ಎಸ್. ಹರೀಶ್, ಫೈರೋಜ್, ವ್ವವಸ್ಥಾಪಕಿ ಜಿ. ಲೀಲಾ, ಸಿಬ್ಬಂದಿ ವರ್ಗದವರು, ಮಾಜಿ ನಿರ್ದೇಶಕರುಗಳು, ಸಮುದಾಯದ ಮುಖಂಡರುಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles