ನ.15 ರಿಂದ 17ರವರೆಗೆ ಕುರುಬ್ಕಿ ಸಂಭ್ರಮಾಚರಣೆ

ದಖನ್ ಪ್ರಸ್ಥಭೂಮಿಯ ಅತ್ಯಂತ ಹಳೆಯ ಪಶುಪಾಲನ ಸಮುದಾಯವಾದ ಕುರುಬ ಜಗತ್ತಿನ ಅನಾವರಣ ಇದೇ ನ.15 ರಿಂದ 17ರ ವರೆಗೆ ನಡೆಯಲಿದ್ದು, ದಖ್ಖನಿ ಡೈರೀಸ್ ಎಂಬ ಈ ಕಾರ್ಯಾಗಾರವನ್ನು ಸಮಾಗತ ಫೌಂಡೇಶನ್ ಆಯೋಜಿಸಲಿದೆ.

ಈ ಮೂರೂ ದಿನದ ಕಾರ್ಯಕ್ರಮದಲ್ಲಿ ಹೆಣಿಯದೇ ಉಳಿದ ಕುರುಬರ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಒಳನೋಟ ನೀಡಲಿದೆ. ದಖ್ಖನ್ ಭಾಗದ ಪಶುಪಾಲಕ ಸಮುದಾಯಗಳೊಂದಿಗಿನ ಆತ್ಮೀಯ ಒಡನಾಟ ಹಾಗೂ ಸಂಶೋಧನೆಯ ಹಿನ್ನೆಲೆಯಿಂದ ಕುರುಬರ ಕುಶಲತೆ, ಸಂಸ್ಕೃತಿ ಮತ್ತು ಸಂರಕ್ಷಣೆಯ ವಿಧಿವಿಧಾನಗಳನ್ನು ಮುನ್ನೆಲೆಗೆ ತರಲಿದೆ.


ಈ ಕಾರ್ಯಕ್ರಮವು ಉಣ್ಣೆಯನ್ನು ನೂಲುವ, ನೇಯುವ ಹಾಗೂ ಪಶುಪಾಲನೆಯ ಹಾಡು-ಹಸೆ, ಚಲನಚಿತ್ರ-ಛಾಯಾಚಿತ್ರ ಪ್ರದರ್ಶನ, ಜಾನಪದ ಗಾಯನ, ಉಣ್ಣೆಯ ವಸ್ತುಗಳ-ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಸೇರಿದಂತೆ ವಿಭಿನ್ನವಾದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.


ಸಮುದಾಯದ ಹಿರಿಯರಾದ ನೀಲಕಂಠ ಮಾಮ, ಹೆಸರಾಂತ ಮಕ್ಕಳ ನಾಟಕಕಾರ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಹಿರಿಯ ಜಾನಪದ ಸಂಶೋಧಕ ಚಂದ್ರಪ್ಪ ಸೊಬಟಿ ಮತ್ತು ವಿನ್ಯಾಸಕಾರ ಗೋಪಿಕೃಷ್ಣ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ.


ದಖ್ಖನಿ ಡೈರೀಸ್ ತಂಡವು ಕಳೆದ ಕೆಲವು ದಶಕಗಳಿಂದ ಕುರುಬ ಸಮುದಾಯದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ವೇದಿಕೆಯಲ್ಲಿ ಕಲಾವಿದರನ್ನು ವಿನ್ಯಾಸಕಾರರನ್ನು ಹಾಗೂ ಪರಿಸರ ಸಂರಕ್ಷಕರನ್ನು, ಕುರುಬ ಸಮುದಾಯದ ಕುಶಲತೆ ಸಂಸ್ಕೃತಿ ಹಾಗೂ ಪರಿಸರ ಸಂರಕ್ಷಣೆಯ ವಿಧಿವಿಧಾನಗಳ ಪರಿಚಯವಾಗಲಿದೆ.


ನ. 15 ರಂದು “ರತ್ನಪಕ್ಷಿ” ಮತ್ತು “ಟಗರಜೋಗಿ ತಲ್ಲಣಗಳು” ಪುಸ್ತಕ ಬಿಡುಗಡೆಗೊಳ್ಳಲಿದೆ.
ನ.16 ರಂದು ಉಣ್ಣೆಕಾರ್ಯಾಗಾರ; ಸೂಜಿ ಫೆಲ್ಟಿಂಗ್, ವಸ್ತ್ರ ನೇಯ್ಗೆ ಇರುತ್ತದೆ.
ಸಂಗೀತ ಸಂಜೆ – ಶಿಲ್ಪಾ ಮೂಡಬಿ ಅವರಿಂದ ( ಜಾನಪದ ಸಂಶೋಧಕಿ) – ಸಂಜೆ 06:00ಕ್ಕೆ ಇರಲಿದೆ.

ನ. 17ರಂದು ಉಣ್ಣೆಯ ಕಾರ್ಯಾಗಾರ- ಸೂಜಿ ಫೆಲ್ಟಿಂಗ್, ವಸ್ತ್ರ ನೇಯ್ಗೆ
(ಸೀಟುಗಳು ಲಭ್ಯವಿದೆ, ನೋಂದಣಿ ಆಧಾರಿತ).

ಬೆಳಿಗ್ಗೆ 11 ರಿಂದ ಸಂಜೆ 8ರವರೆಗೆ ಕಾರ್ಯಾಗಾರ ನಡೆಯಲಿದೆ.

ಮಾರಾಟ ಮಳಿಗೆ ಸೇರಿದಂತೆ ಉಣ್ಣೆಯ ವಸ್ತುಗಳು, ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ. ಕಂಬಳಿ, ಮ್ಯಾಟ್, ಬ್ಯಾಗ್ ಮತ್ತು ಇತರೆ ವಿಶಿಷ್ಟ ಉಣ್ಣೆಯ ಕಲಾಕೃತಿಗಳು ಲಭ್ಯವಿರುತ್ತದೆ.
ಉಣ್ಣೆಯನ್ನು ನೂಲುವ, ನೇಯುವ, ಫೆಲ್ಟ್ ಹಾಗೂ ಅವುಗಳ ದೃಶ್ಯ ಪ್ರಸ್ತುತಿಯ ಮೂಲಕ
ಛಾಯಾಚಿತ್ರ ಪ್ರದರ್ಶನ,
ಆಯ್ದ ಉತ್ತರ ಕರ್ನಾಟಕದ ಖಾದ್ಯಗಳ ಪ್ರದರ್ಶನವಿರುತ್ತದೆ.

ಕಾರ್ಯಕ್ರವು ಕುರುಬ್ಕಿ ಸಮಾಗತ ಫೌಂಡೇಶನ್, 4ನೇ ಮಹಡಿ, ಚರ್ಚ್ ಸ್ಟ್ರೀಟ್
ಬೆಂಗಳೂರು-01, ಗುರುತು: ಸೋಶಿಯಲ್ ಮೇಲ್ಮಹಡಿ ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ 9008484880 | 9986344436.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles