ತುಮಕೂರು: ನಗರದ ಸುಫಿಯಾ ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಶುಕ್ರವಾರ ನಡೆಯಿತು.
ಅಧ್ಯಕ್ಷ ಗಾದಿಗೆ ನಡೆದ ಪೈಪೋಟಿಯಲ್ಲಿ ಲಕ್ಷ್ಮೀನಾರಾಯಣ ಕೆ. ಅವರು 56 ಮತಗಳನ್ನು ಗಳಿಸುವ ಮೂಲಕ 10 ಮತಗಳ ಅಂತರದಿಂದ ಜಯಗಳಿಸಿದರು.
ಇನ್ನು ಉಪಾಧ್ಯಕ್ಷರಾಗಿ ರಂಗನಾಥ್ ಎ.ಜಿ ರವರು ಅವಿರೋಧ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ರವಿಕುಮಾರ್ ಜಿ.ಎಲ್., ಅವರು 84 ಮತಗಳನ್ನು ಗಳಿಸುವ ಮೂಲಕ 34 ಮತಗಳ ಅಂತರದಿಂದ ಜಯಶೀಲರಾದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಹೇಮಾನ್ಷ್ ಪಿ.ಜೈನ್ ಅವರು 92 ಮತಗಳನ್ನು ಪಡೆದು 42 ಮತಗಳ ಅಂತರದಿಂದ ವಿಜಯಪತಾಕೆ ಹಾರಿಸಿದರು.
ಅಧ್ಯಕ್ಷ ಗಾದಿಗೆ 4 ನಾಮಪತ್ರ ಸಲ್ಲಿಕೆಯಾಗಿದ್ದವು. ಉಪಾಧ್ಯಕ್ಷ ಸ್ಥಾನಕ್ಕೆ 1, ಕಾರ್ಯದರ್ಶಿ 2 ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆಯಾಗಿದ್ದವು.
ಚುನಾವಣೆಯಲ್ಲಿ 136 ಮತಗಳು ಚಲಾವಣೆಗೊಂಡರೆ 3 ಮತಗಳು ಅನರ್ಹಗೊಂಡವು. ಚುನಾವಣಾಧಿಕಾರಿಗಳಾಗಿ ಕಾಲೇಜಿನ ಉಪ ಪ್ರಾಂಶುಪಾಲರಾದ ಓಬಯ್ಯ ಟಿ., ಸಹಾಯಕ ಉಪನ್ಯಾಸಕಿ ಮಮತಾ ಪಿ.ಎಲ್, ರೇಣುಕಾ ಶಿಸ್ತು ಬದ್ಧವಾಗಿ ಚುನಾವಣೆ ನಡೆಸಿಕೊಟ್ಟರು.
ಕಾಲೇಜಿನ ಸವಿತಾ, ಕಾಶಿಫ್ ಹಾಗೂ ವಿವಿಧ ವಿಭಾಗದ ಕಾನೂನು ವಿದ್ಯಾರ್ಥಿಗಳಿದ್ದರು.