ತುಮಕೂರು | ಅಂತರ್ ಜಿಲ್ಲಾ‌ ಜೇಬುಗಳ್ಳರ ಬಂಧನ

ತುಮಕೂರು: ಜೇಬು ಕಳ್ಳತನ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅಂತರ್ ಜಿಲ್ಲಾ ಜೇಬುಗಳ್ಳರ ಗ್ಯಾಂಗ್ ವೊಂದು ಸಿಕ್ಕಿಬಿದ್ದಿದೆ. 

ಕವಿತಾ (38), ಶ್ರೀಮತಿ ಸೂರ್ಯ (38), ಲಾವಣ್ಯ (ವಯಸ್ಸು ತಿಳಿದಿಲ್ಲ), ಸಬೀನಾ (25) ಬಂಧನಕ್ಕೊಳಗಾದ ಕಳ್ಳತನ ಆರೋಪಿಗಳು.

ಇತ್ತೀಚೆಗೆ ತಿಪಟೂರು ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರು ನನ್ನ ಪರ್ಸ್ ಅನ್ನು ಕಳವು ಮಾಡಿರುತ್ತಾರೆಂದು ವಾಸಿಂ ಬಿನ್ ಮೆಹಬೂಬ್ ಸಾಬ್ ಗಾಂಧಿನಗರ ತಿಪಟೂರು ರವರು ದೂರು ನೀಡಿದ ಹಿನ್ನಲೆಯಲ್ಲಿ ತಿಪಟೂರುನಗರ ಪೊಲೀಸ್ ಠಾಣಾ ಮೊ.ನಂ 208/24 ಕಲಂ 303(2) ಬಿಎನ್‌ಎಸ್ ರಿತ್ಯಾ ಕೇಸು ದಾಖಲಿಸಲಾಗಿತ್ತು.

ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಿಳೆಯರನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಇವರುಗಳು ಬಸ್ಸುಗಳಲ್ಲಿ ಹೆಚ್ಚಿನ ಜನ ತುಂಬಿರುವ ಸಮಯದಲ್ಲಿ ಪ್ರಯಾಣಿಕರ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳನ್ನು, ಪರ್ಸ್‌ಗಳನ್ನು ಯಾಮಾರಿಸಿ ಕಳವು ಮಾಡುತ್ತಿದ್ದುದ್ದಾಗಿ ಬಾಯಿ ಬಿಟ್ಟಿದ್ದಾರೆ.

ಅಪರ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ ಹಾಗೂ ಬಿ ಎಸ್ ಅಬ್ದುಲ್‌ಖಾದರ್ ರವರ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಉಪಾಧಿಕ್ಷಕರಾದ ವಿನಾಯಕ ಶೆಟಗೇರಿ ರವರ ಉಸ್ತುವಾರಿಯಲ್ಲಿ ತಿಪಟೂರು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್ ಸಿ ಹಾಗೂ ಪಿಎಸ್‌ಐ ಡಿ ಕೃಷ್ಣಪ್ಪ ರವರ ನೇತೃತ್ವದಲ್ಲಿ ಎಎಸ್‌ಐ ಚಿಕ್ಕಲಕ್ಕೇಗೌಡ, ಸಿಬ್ಬಂಧಿಗಳಾದ ಮೋಹನ್ ಕುಮಾರ್., ಬೋರಲಿಂಗಯ್ಯ, ಮಂಜುನಾತ್ ಎಂ ಕುಪ್ಪಾಡ್, ಸಾಗರ ಅಂಬಿಗೇರ, ಯತೀಶ್ ಕುಮಾರ್, ಶಶಿಧರ್,ಲೋಕೇಶ್, ಗಂಗಾಧರ್ ಮಂಜುಳಾ, ಮೈತ್ರಮ್ಮ, ಸುಮಾ. ಚಂದ್ರಕಲಾ, ವೀಣಾ, ಭಾರತಿ, ಲತಾ, ನಂದಿನಿ, ಹಾಗೂ ಚಾಲಕರಾದ ಮನೋಜ್ ರವರುಗಳನ್ನು  ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಐಪಿಎಸ್ ರವರು ಸಿಬ್ಬಂದಿಯವರನ್ನು ಪ್ರಶಂಸಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles