ಗುಬ್ಬಿ: ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿದೇವನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಹಂಚಿಕೆ ಆಗಿರುವ ಖಾಲಿ ನಿವೇಶನಗಳನ್ನು ಕೂಡಲೇ ರದ್ದುಪಡಿಸಿ ಬಡ ಫಲಾನುಭವಿಗಳಿಗೆ ವಿತರಿಸುವಂತೆ ಗ್ರಾಮ ಪಂಚಾಯಿತಿಯ ಮುಂಭಾಗ ದಲಿತ ಮುಖಂಡರು ಸರ‍್ವಜನಿಕರು ಪ್ರತಿಭಟನೆ ನಡೆಸಿದರು.
ಮುಖಂಡ ಡಿ. ಮಂಜುನಾಥ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ಹರಿದೇವನಹಳ್ಳಿ ಗ್ರಾಮದ ಶ್ರೀನಿವಾಸ ನಗರದಲ್ಲಿ ಉಳಿಕೆ ನಿವೇಶನವನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಸಂಬಂಧ ನಾಗರಿಕ ಹಕ್ಕು ಜಾರಿ ನಿರ‍್ದೇಶನಾಲಯ ಮತ್ತು ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿ ಇಲಾಖೆ ಹರಿದೇವನಹಳ್ಳಿ ಗ್ರಾಮದ ನಿವೇಶನ ಹಂಚಿಕೆಯಲ್ಲಿ ಕ್ರಮಬದ್ಧವಾಗಿ 48 ಹಕ್ಕು ಪತ್ರಗಳನ್ನು ಮಾತ್ರ ಫಲಾನುಭವಿಗಳಿಗೆ ವಿತರಣೆ ಮಾಡಿರುವುದು ಕಂಡುಬಂದಿರುತ್ತದೆ. ಅಂದಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಂಗಾ ಮಹದೇವಯ್ಯ ಹಾಗೂ ಅಂದಿನ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ಸಿ ಗಿರೀಶ್ ವಿರುದ್ಧ ಅಧಿಕಾರ ದರ‍್ಬಳಕೆ ದರ‍್ನಡತೆ ಅಡಿಯಲ್ಲಿ ಪ್ರಾದೇಶಿಕ ಆಯುಕ್ತರು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯ ಹಂತದಲ್ಲಿರುತ್ತದೆ.
ಅಕ್ರಮವಾಗಿ ಮಾಡಲಾಗಿರುವ ಈ ಖಾತೆಗಳನ್ನು ವಜಾಗೊಳಿಸಿ ಫಲಾನುಭವಿಗಳಿಗೆ ವಿತರಿಸುವ ಸಂಬಂಧ. ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪನವರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು ಸಹ ಅಧಿಕಾರಿಗಳ ಬೇಜವಾಬ್ದಾರಿ ತನದ ವಿರುದ್ಧ ಇಂದು ಗ್ರಾಮಸ್ಥರು ಹಾಗೂ ದಲಿತರು ಪ್ರತಿಭಟನೆ ನೆಡೆಸುತ್ತಿದ್ದು ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.
ದಲಿತ ಮುಖಂಡ ಶಿವನಂಜಪ್ಪ ತಾಲೂಕಿನಲ್ಲಿ ದಲಿತರ ಮೇಲಿನ ದರ‍್ಜನ್ಯಗಳು ನಡೆಯುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಕಲ್ಲೂರು ಗ್ರಾಮದಲ್ಲಿ ಸಾಕಷ್ಟು ದಲಿತ ಕುಟುಂಬಗಳು ವಾಸವಿದ್ದು ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕೆಲ ಗ್ರಾಮ ಪಂಚಾಯತಿಯ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ, ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ಅಹೋ ರಾತ್ರಿಯ ಧರಣಿ ಮಾಡಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ರುದ್ರ ಪ್ರಕಾಶ್ ಮಾತನಾಡಿ ಇಂದು ಅನ್ಯಾಯಕ್ಕೆ ಒಳಗಾಗಿರುವ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪತ್ರರ‍್ತ ಮಂಜುನಾಥ್ ಹೋರಾಟಕ್ಕೆ ಮುಂದಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಈಗಾಗಲೇ ಶಾಸಕರ ಗಮನಕ್ಕೆ ತಂದಿದ್ದು. ನಿವೇಶನ ಹಂಚಿಕೆ ವಿಚಾರವಾಗಿ ಕ್ರಮ ವಹಿಸುವಂತೆ ಶಾಸಕ ಎಂ ಟಿ ಕೃಷ್ಣಪ್ಪನವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ ಬಿಳಿ ನಂದಿ ಗ್ರಾಮದ ಗೋಮಾಳದ ಜಮೀನಿನಲ್ಲಿ ಸುಮಾರು ಆರು ಎಕ್ಕರೆ ಜಮೀನನ್ನು ಕಲ್ಲೂರು ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲು ಮುಂದಾಗಿದ್ದು. ಈಗಾಗಲೇ ಕಂದಾಯ ಇಲಾಖೆಯ ವತಿಯಿಂದ ಜಮೀನು ಸ್ವಾಧೀನ ಕರ‍್ಯ ನಡೆಯದಿದ್ದು. ರ‍್ಕಾರದ ವತಿಯಿಂದ ಬಡ ಕುಟುಂಬಗಳಿಗೆ ಹುಡ್ಕೋ ಯೋಜನೆ ಅಡಿಯಲ್ಲಿ ವಸತಿಗಳ ನರ‍್ಮಾಣ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ರ‍್ಹ ಫಲಾನುಭವಿಗಳನ್ನು ಗುರುತಿಸಿ ತಾಲೂಕು ಆಡಳಿತ ಮುಂದಾಗಬೇಕು ಎಂದು ತಿಳಿಸಿದರು.
ಮುಖಂಡ ನರಸಿಯಪ್ಪ ಮಾತನಾಡಿ ದಲಿತ ಸಮುದಾಯದವರ ಸಮಸ್ಯೆ ಬಗೆಹರಿಯದೆ ಇದ್ದರೆ ಜಿಲ್ಲಾಧಿಕಾರಿಗಳು ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಜಿಲ್ಲಾಧ್ಯಂತ ದಲಿತ ಸಂಘಟನೆ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸ್ಥಳಕ್ಕೆ ಧಾವಿಸಿದ ತಾಲೂಕು ಪಂಚಾಯಿತಿ ಕರ‍್ಯನರ‍್ವಾಹಕ ಅಧಿಕಾರಿ ಶಿವಪ್ರಕಾಶ್ ಪ್ರತಿಭಟನ ನಿರತರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ನಿವೇಶನ ಹಂಚಿಕೆಯ ಸಂಬಂಧ ತರ‍್ತಾಗಿ ಕ್ರಮವಹಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಜುಲೇಖಾಬಿ ಮಹಮದ್ ಯೂಸುಫ್, ಉಪಾಧ್ಯಕ್ಷರಾದ ಸುಮಿತ್ರ ಶಿವಯ್ಯ, ನರಸೀಯಪ್ಪ, ರುದ್ರ ಪ್ರಕಾಶ್, ಶಾಂತರಾಜು, ಗಿರೀಶ್, ಗೋವಿಂದರಾಜು, ಶ್ರೀನಿವಾಸ್, ನಾರನಹಳ್ಳಿ ಶಿವು, ನಾರಾಯಣಪ್ಪ, ಶಿವಲಿಂಗಯ್ಯ, ಬಾರೆಮನೆ ಗೋಪಿ,ಚಿದನಂದ್, ಶೇಷಪ್ಪ, ಸುರೇಶ್, ಮಹದೇವಯ್ಯ ಹಾಗೂ ಇತರರು ಹಾಜರಿದ್ದರು.