ತುಮಕೂರು: ಮನೆಗಳ್ಳತನ ಆರೋಪಿಗಳನ್ನು ಪೊಲೀಸರು ಬಂಧಿಸಿ 1.45 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸ.ಜಿ (30) ಕಳ್ಳತನ ಆರೋಪಿ.
ಶಿರಾ ತಾಲ್ಲೂಕ್ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಎಂಬುವವರ ಮನೆಯಲ್ಲಿ ಫೆ.7 ರಂದು ಕಳ್ಳತನ ನಡೆದಿತ್ತು. ಮನೆಯ ಬೀಗ ಬೀಗ ಮುರಿದ ಕಳ್ಳರು ಬೀರುವಿನಲ್ಲಿದ್ದ 20 ಸಾವಿರ ನಗದು ಹಾಗೂ 4 ಗ್ರಾಂನ ಮಾಟಿ, 12 ಗ್ರಾಂನ ಕೊರಳಚೈನ್, ಮಾಂಗಲ್ಯಸರವನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಪಟ್ಟನಾಯಕನಹಳ್ಳಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.