ಶಿರಾ | ಪ್ರೀತಿಸಿ ಮೋಸ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ; ಡೆತ್‌ ನೋಟ್‌ ಪತ್ತೆ

ಶಿರಾ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಚಂದ್ರಿಕಾ (21) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಪತ್ತೆಯಾಗುತ್ತಿದಂತೆ ಪ್ರೇಮಿ ಯೋಗೀಶ್‌ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಶಿರಾ ತಾಲೂಕಿನ ಮಡಕನಹಳ್ಳಿ ಗ್ರಾಮದ ಚಂದ್ರಿಕಾ ಎಂಬ ಯುವತಿ ತುಮಕೂರು ನಗರದ ಎಸ್ಐಟಿ ಬಳಿಯ ಹಿಂದುಳಿದ ವರ್ಗಗಳ ಹಾಸ್ಟಲ್ ನಲ್ಲಿದ್ದುಕೊಂಡು ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಯೋಗೀಶ್ ಮತ್ತು ಚಂದ್ರಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಯೋಗೀಶ್ ಎಂಬ ಯುವಕ ಪ್ರೀತಿಸಿ ಮೋಸ ಮಾಡಿದ್ದಕ್ಕೆ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಚಂದ್ರಿಕಾ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಡೆತ್ ನೋಟ್ ಪೊಲೀಸರ ಕೈ ಸೇರಿದ ಬೆನ್ನಲ್ಲೇ ಯೋಗೀಶ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಯುವತಿ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ತುಮಕೂರು ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಅಸಹಜ ಸಾವು (ಯುಡಿಆರ್)‌ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಡೆತ್‌ ನೋಟ್‌ ಪತ್ತೆಯಾಗಿದೆ. ಈ ಬೆಳವಣಿಗೆಯ ನಂತರ ಚಂದ್ರಿಕಾ ತಾಯಿ ನೀಡಿದ ದೂರಿನ ಮೇರೆಗೆ ಯೋಗೀಶ್ ಮತ್ತು ಆತನ ತಾಯಿ ಹಾಗೂ ಮತ್ತೂಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಎಸ್ಸಿ, ಎಸ್ಟಿ, ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಲಿಂಗಾಯತ ಸಮುದಾಯದ ಯೋಗೀಶ್ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ್ದಾನೆ. ನೀನು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ಚಂದ್ರಿಕಾಗೆ ಮಾನಸಿಕ ಮತ್ತು ದೖಹಿಕ ಹಿಂಸೆ ನೀಡಿದ್ದಾನೆ. ಬೇರೆ ಹುಡುಗಿ ಜತೆ ಮದುವೆ ಆಗುತ್ತಿರುವುದಾಗಿ ಹೇಳಿ ಕಿರುಕುಳ ನೀಡಿದ್ದಾನೆ. ಮನೆಯಲ್ಲಿ ನೋಡಿದ ಹುಡುಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಕಿರುಕುಳ, ಹಿಂಸೆ ತಾಳಲಾರದೆ ಚಂದ್ರಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎಸ್ಎಸ್ ಪುರಂನ ‘ತಿಂಡಿ ಗುರು’ ಹೊಟೇಲ್ ನಲ್ಲಿ ಚಂದ್ರಿಕಾ ಕ್ಯಾಶಿಯರ್ ಆಗಿ ಪಾರ್ಟ್ ಟೖಮ್ ಕೆಲಸ ಮಾಡುತ್ತಿದ್ದರು. ಹೋಟೆಲ್ ಮುಚ್ಚಿದ ನಂತರ ಇದರ ಮಾಲಿಕ ದರ್ಶನ್ ಮನೆಯಲ್ಲೆ ಮೇಕಿಂಗ್ ಸೆಂಟರ್ ನಡೆಸುತ್ತಿದ್ದರು. ಕೆಲವು ದಿನಗಳಿಂದ ಚಂದ್ರಿಕಾ ಅಡುಗೆ ಕೆಲಸ ಮಾಡುತ್ತಾ, ಅಲ್ಲಿಯೆ ವಾಸವಿದ್ದರು. ಇದೇ ಮನೆಯಲ್ಲಿ ಯುವತಿ ಈಚೆಗೆ ನೇಣಿಗೆ ಶರಣಾಗಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles