ತುಮಕೂರು: ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ವಶಕ್ಕೆ ಪಡೆಯುವಲ್ಲಿ ತುಮಕೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, 11,60,511 ರೂ ಬೆಲೆ ಬಾಳುವ 42 ದ್ವಿಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಶಿಡ್ಲಘಟ್ಟ ಟೌನ್ ನಿವಾಸಿ ಮುಭಾರಕ್ ಖಾನ್ ಅಲಿಯಾಸ್ ಮಟನ್ ಮುಭಾರಕ್ (53) ಕಳ್ಳತನದ ಆರೋಪಿ.
ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೈಕುಗಳು ಕಳ್ಳತನವಾಗುತ್ತಿದ್ದ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.
ಹೆಚ್ಚುವರಿ ಪೊಲೀಸ್ ಅಧೀಕ್ಷರುಗಳಾದ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್ ಬಿ.ಎಸ್. ರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗಾಗಿ ತುಮಕೂರು ಉಪವಿಭಾಗದ ಡಿ.ವೈ.ಎಸ್.ಪಿ. ಚಂದ್ರಶೇಖರ್, ಕ್ಯಾತ್ಸಂದ್ರ ವೃತ್ತದ ಸಿಪಿಐ ರಾಮ ಪ್ರಸಾದ್ ಹಾಗೂ ಕ್ಯಾತ್ಸಂದ್ರ ಪೊಲೀಸ್ ಠಾಣೆ ಪಿ.ಎಸ್.ಐ ಚೇತನ್ ಕುಮಾರ್, ಎಸ್.ಎಸ್ ಮತ್ತು ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ.ರಮೇಶ್.ಜಿ., ಹೆಚ್.ಸಿ ಸೌಭಾಗ್ಯಮ್ಮ, ಹೆಚ್.ಸಿ ಹನುಮರಂಗಯ್ಯ, ಹೆಚ್.ಸಿ ಶಶಿಧರ, ಹೆಚ್.ಸಿ ಮಹೇಶ್, ಸಿಪಿಸಿ ಗಿರೀಶ್ , ಸಿಪಿಸಿ ಶರಣಪ್ಪ, ಸಿಪಿಸಿ ನದೀಂ ಪಾಷ, ಸಿಪಿಸಿ ಸಂತೋಷ್ ಇವರುಗಳು ತಂಡದಲ್ಲಿದ್ದರು.
ಕಾರ್ಯಾಚರಣೆ ಯಶಸ್ವಿಗೆ ಶ್ರಮಿಸಿದ ಪೊಲೀಸರಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. ಅವರು ಅಭಿನಂದನೆ ತಿಳಿಸಿದ್ದಾರೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಆಧರಿಸಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ-2, ತುಮಕೂರು ನಗರ ಪೊಲೀಸ್ ಠಾಣೆಯ-3, ಶ್ರೀನಿವಾಸಪುರ ಠಾಣೆಯ- 2. ಆಂಧ್ರಪ್ರದೇಶದ ಕುಪ್ಪಂ ಪೊಲೀಸ್ ಠಾಣೆಯ-1, ರಾರ‍್ಟ್ ಸನ್ ಪೇಟೆ ಪೊಲೀಸ್ ಠಾಣೆಯ-1. ಯಲಹಂಕ ಪೊಲೀಸ್ ಠಾಣೆಯ-1, ಬಾಗೇಪಲ್ಲಿ ಪೊಲೀಸ್ ಠಾಣೆಯ-1, ಪಾವಗಡ ಪೊಲೀಸ್ ಠಾಣೆಯ-1. ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ-1, ನೆಲಮಂಗಲ ಪೊಲೀಸ್ ಠಾಣೆಯ-1 ಮತ್ತು ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯ-1 ಮತ್ತು ಇತರೆ ಪ್ರಕರಣಗಳು ದಾಖಲಾಗದೇ ಇರುವ ದ್ವಿಚಕ್ರ ವಾಹನಗಳು-27, ಒಟ್ಟು 42 ದ್ವಿಚಕ್ರ ವಾಹನಗಳು. ಒಟ್ಟು 15 ಪ್ರಕರಣಗಳು ಮತ್ತು ಇತರೆ 27 ದ್ವಿಚಕ್ರ ವಾಹನಗಳ ಒಟ್ಟು 11,60,511/- ರೂ ಬೆಲೆ ಬಾಳುವ 42 ದ್ವಿ ಚಕ್ರವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.