ತುಮಕೂರು: ಸುಪ್ರಿಂಕೋರ್ಟಿನ 2024ರ ಆಗಸ್ಟ್ 01ರ ತೀರ್ಪುನ್ನು ರಾಜ್ಯ ಸರಕಾರ ಯಥಾವತ್ತು ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಿಗೆ ಮೀಸಲಾತಿಯ ಪ್ರಮಾಣವನ್ನು ಅವರ ಜನಸಂಖ್ಯೆಗೆ ಅನುಗುಣವಾಗಿ ಹಂಚಬೇಕೆಂದು ಆಗ್ರಹಿಸಿ, ಇಂದು ಛಲವಾದಿ ಮಹಾಸಭಾ ವತಿಯಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ 101 ಜಾತಿಗಳಿರುವುದು ಸರಿಯಷ್ಟೇ, ಇದರಲ್ಲಿ ಪ್ರಮುಖವಾಗಿ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ, ಆದಿ ಆಂಧ್ರ ಇವುಗಳು ಜಾತಿಸೂಚಕ ಪದಗಳಾಗಿದ್ದು, ಇವುಗಳಡಿಯಲ್ಲಿ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಛಲವಾದಿ ಗುಂಪಿನೊಂದಿಗೆ ತಮಿಳು ಮಾತನಾಡುವ ಪರೈಯ ತೆಲುಗು ಮಾತನಾಡುವ ಮಾಲ ಇವುಗಳೆಲ್ಲ ಮೇಲೆ ತಿಳಿಸಿದ ಜಾತಿಸೂಚಕ ಪದಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ಗೊಂದಲ ಸೃಷ್ಟಿ ಮಾಡಿವೆ. 101 ಜಾತಿಗಳಲ್ಲಿ ಬರುವ 98 ಜಾತಿಗಳನ್ನು ಗಣತಿ ಮಾಡವುದು ಬಹುಸುಲಭ. ಆದರೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಜಾತಿಗಳನ್ನು ಆಯಾ ಗುಂಪಿನಲ್ಲಿ ವರ್ಗೀಕರಣ ಮಾಡುವುದು ಬಲು ಕಷ್ಟ. ಹಾಗಾಗಿ ಎಕೆ.ಎಡಿ, ಎಎ ಜಾತಿ ಸೂಚಕ ಪದಗಳನ್ನು ಕೈಬಿಟ್ಟು ಮೂಲ ಜಾತಿಗಳನ್ನು ಬೇರ್ಪಡಿಸಿ ಗಣತಿಯಲ್ಲಿ ನಿಖರವಾದ ಮಾಹಿತಿ
ಪಡೆದು ಅವುಗಳನ್ನು ಆಯಾ ರಕ್ತ ಸಂಬಂಧಿತ ಜಾತಿಗಳ ಜೊತೆಗೆ ವಗೀಕರಣ ಮಾಡಿ ಆಯಾ ಜಾತಿಗಳ ವೈಜ್ಞಾನಿಕವಾಗಿ ಗಣತಿ ಮಾಡಲು ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಜನಸಂಖ್ಯೆ ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿಯನ್ನು ದೃಢೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ನಿರ್ಧಸಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿಗಳ ಬಲಕ್ಕೆ ಮೀಸಲಾತಿ ಜಾಗೃತಿ ಸಮಿತಿಯ ಅಧ್ಯಕ್ಷರಾದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ದಾಸಯ್ಯ 26-08-2024 ರಂದು ಮುಖ್ಯ ಮಂತ್ರಿಗಳಿಗೆ ಸವಿವಾರವಾಗಿ ಬರೆದಿದ್ದಾರೆ. ಅಲ್ಲದೆ ಒಳಮೀಸಲಾತಿ ಅನುಷ್ಟಾನದ ಬಗ್ಗೆ ದಿನಾಂಕ 26-10-2024 ರಂದು ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯ ನಿರ್ಣಯದ (ಪ್ರತಿಯನ್ನು ಲಗತ್ತಿಸಿದೆ) ಪ್ರತಿಯನ್ನು ಈ ಮೂಲಕ ತಮಗೆ ಸಲ್ಲಿಸುತಿದ್ದೇವೆ. ಇದರಂತೆ ಸರಕಾರ ಎಕೆ, ಎಡಿ, ಎಎ ಗೊಂದಲವನ್ನು ಸರಿಪಡಿಸಿ ಮೂಲ ಜಾತಿಗಳ ನಿಖರವಾದ ಜನಸಂಖ್ಯೆಯ ದತ್ತಾಂಶವನ್ನು ಪಡೆದು ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿಯನ್ನು ವರ್ಗಿಕರಣ ಮಾಡಬೇಕೆಂದು ತುಮಕೂರು ಜಿಲ್ಲಾ ಛಲವಾದಿ ಮಹಾ ಸಭಾ ಒತ್ತಾಯ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಛಲವಾದಿ ಮಹಾಸಭಾ ಮುಖಂಡರಾದ ಸಿ.ಭಾನುಪ್ರಕಾಶ್, ಛಲವಾದಿ ಶೇಖರ್, ಹೆಚ್.ಎಸ್.ಪರಮೇಶ್, ಎಸ್.ರಾಜಣ್ಣ, ರಂಗಯ್ಯ, ದೊಡ್ಡಸಿದ್ದಯ್ಯ, ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಟಿ.ಆರ್.ನಾಗೇಶ್, ವಿಜಯಲಕ್ಷ್ಮಿ, ರತ್ನಮ್ಮ, ಭಾಗ್ಯ, ಹೆಗ್ಗೆರೆ ಕೃಷ್ಣಮೂರ್ತಿ, ಸಿದ್ದಲಿಂಗಯ್ಯ, ಗೋವಿಂದರಾಜು, ತುರುವೇಕೆರೆ ರಾಮಣ್ಣ, ಜಗದೀಶ್, ಪಾವಗಡ ಗಿರಿಸ್ವಾಮಿ, ಮಹಾಲಿಂಗಯ್ಯ ಮತ್ತಿತರರ ಮುಖಂಡರು ಹಾಜರಿದ್ದರು.