ಕೆರೆಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಶಿರಾ ಮೂಲದ ನಾಲ್ವರ ಪೈಕಿ ಓರ್ವ ಯುವಕ ಈಜು ಬಾರದೇ ನೀರಿನಲ್ಲಿ ಮುಳುಗಿದ್ದ. ರಕ್ಷಣಾ ತಡದಿಂದ ಸತತ 16 ಗಂಟೆ ತೀವ್ರ ಶೋಧ ನಡೆಸಿದ ಬಳಿಕ ಮಂಗಳವಾರ ಬೆಳಿಗ್ಗೆ ಯುವಕನ ಮೃತದೇಹ ಪತ್ತೆಯಾಗಿದೆ.

ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಈಜಲು ಹೋದ ನಾಲ್ಕು ಜನರ ಪೈಕಿ ಈಜು ಬಾದೆ ರಾಕೇಶ್(28) ಎಂಬ ಯುವಕ ನೀರಿನಲ್ಲಿ ಮುಳುಗಿದ್ದ ಎನ್ನಲಾಗಿದೆ. ಹೊಸಹಳ್ಳಿಯಲ್ಲಿದ್ದ ಈ ಕೂಲಿ ಕಾರ್ಮಿಕರ ತಂಡ ಜಲ ಜೀವನ್ ಮಿಷನ್ ಕಾಮಗಾರಿ ಮಾಡುತ್ತಿದ್ದರು. ಹಬ್ಬದ ಹಿನ್ನಲೆ ಊರಿಗೆ ತೆರಳಿ ರಜೆ ಮುಗಿಸಿಕೊಂಡು ಮರಳಿ ಬಂದು ಸೋಮವಾರ ಮಧ್ಯಾಹ್ನ ಕೆರೆಗೆ ಇಳಿದಿದ್ದಾರೆ. ಈ ಸಮಯದಲ್ಲಿ ರಾಕೇಶ್ ನಾಪತ್ತೆಯಾಗಿದ್ದಾನೆ. ಜೊತೆಗಾರರು ಹುಡುಕಾಟ ನಡೆಸಿ ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರೊಂದಿಗೆ ಅಗ್ನಿ ಶಾಮಕ ದಳ ತೀವ್ರ ಹುಡುಕಾಟ ನಡೆಸಿದ್ದರು. ಕತ್ತಲಾದ ಬಳಿಕ ಮಂಗಳವಾರ ಬೆಳಿಗ್ಗೆ ಶೋಧ ಕಾರ್ಯ ಆರಂಭಿಸಿ ರಾಕೇಶ್ ಶವವನ್ನು ಹೊರ ತೆಗೆದಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ಮಳೆಯಲ್ಲೇ ಯಶಸ್ವಿ ಕಾರ್ಯಾಚರಣೆ ನಡೆಸಿದರು. ಸೋಮವಾರದಿಂದ ಸ್ಥಳದಲ್ಲಿ ಮೊಕ್ಕಾಂ ಹೂಡಿದ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles