ತುಮಕೂರು : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಬಗಾಡಿಯ ಚೈತ್ರ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್, ರಾಣಿ ಇಂಜಿನ್ ವಾಲ್ವ್ ಲಿಮಿಟೆಡ್, ಅನ್ ಲಿಮಿಟೆಡ್, ವೆಕ್ಸ್ಫೋರ್ಡ್, ಫರ್ನಿಚರ್ ಫಿಟ್ಟಿಂಗ್ ಸ್ಕಿಲ್ಡ್ ಕೌನ್ಸಿಲ್ ಹಾಗೂ ವಾಯ್ಸ್ ಆಫ್ ನೀಡಿ ಫೌಂಡೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಂಬಂಧ ನವೆಂಬರ್ 25ರಂದು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಉತ್ತೀರ್ಣ/ಅನುತ್ತೀರ್ಣ; ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಜಿ.ಎನ್.ಎಂ., ಬಿ.ಎಸ್ಸಿ(ನರ್ಸಿಂಗ್), ಬಿ.ಫಾರ್ಮ, ಎಂ.ಫಾರ್ಮ, ಎಂ.ಎಸ್ಸಿ(ನರ್ಸಿಂಗ್), ಬಿ.ಇ.(ಮೆಕಾನಿಕಲ್ನಲ್ಲಿ 1 ರಿಂದ 2 ವರ್ಷಗಳ ಅನುಭವ ಕಡ್ಡಾಯ) ಪಾಸಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ನವೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2278488, 9071021143. 9513136642ನ್ನು ಸಂಪರ್ಕಿಸಬೇಕೆಂದು ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.