ಕೊರಟಗೆರೆ: ನಾನು ಕೂಡ ಜೀರೋ ಮಟ್ಟದಿಂದ ನಿಮ್ಮೆಲ್ಲರ ಬೆಂಬಲ, ಪ್ರೀತಿ ಆಶೀರ್ವಾದ ಪಡೆದು ಈ ಮಟ್ಟಕ್ಕೆ ಬಂದಿರುವೆ. ನನ್ನ ಜೀವಮಾನದ ಕೊನೆಯವರೆಗೂ ನಿಮ್ಮೊಂದಿಗೆ ಇರಲು ಇಷ್ಟಪಡುತ್ತೇನೆ. ಸದಾ ನಿಮ್ಮಗಳ ಸೇವೆಗೆ ನಾನು ಬದ್ಧನಾಗಿರುತ್ತೇನೆ ಎಂದು ಕಾಂಗ್ರೆಸ್ ಜನಪ್ರಿಯ ಮುಖಂಡರಾದ ಹೆಚ್.ಕೆ ಮಹಾಲಿಂಗಪ್ಪ ತಿಳಿಸಿದರು.
ಪಟ್ಟಣದ ಎಸ್.ಎಸ್.ಆರ್ ವೃತ್ತದಲ್ಲಿ ಸೋಮವಾರ
ಅಭಿಮಾನಿಗಳು ಆಯೋಜಿಸಿದ್ದ 56ನೇ ವರ್ಷದ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಅತ್ಯಂತ ಸರಳ ಸಜ್ಜನಿಕೆಯ ಗೃಹಮಂತ್ರಿಗಳಾದ ಡಾ.ಜಿ ಪರಮೇಶ್ವರ ರವರ ಮಾರ್ಗದರ್ಶನದಲ್ಲಿ ಬಸ್ ಸ್ಟಾಂಡ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಊರಿನ ಶಾಲೆಗೆ ಉಚಿತ ಪುಸ್ತಕ, ಸಾಮಾಗ್ರಿಗಳನ್ನು ನೀಡಲಾಯಿತು. ಹಾಗೇಯೆ ಸರ್ಕಾರಿ ಆಸ್ಪತ್ರೆಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಕಾಂಗ್ರೇಸ್ ಮುಖಂಡ ಕಾರ್ ಮಹೇಶ್ ಮಾತನಾಡಿ, ಬಡವರನ್ನು ಕಂಡರೆ ಅಪಾರವಾದ ಪ್ರೀತಿ, ವಾತ್ಸಲ್ಯ ಹೊಂದಿರುವ ಹಾಗೂ ಜನರ ಜೊತೆಗೆ ಸದಾ ಇರುವ ವ್ಯಕ್ತಿ ನಮ್ಮ ಮುಖಂಡರಾದ ಮಹಾಲಿಂಗಪ್ಪ ರವರು ದೇವರ ಆಶೀರ್ವಾದ ದಿಂದ ಮುಂದಿನ ದಿನಗಳಲ್ಲಿ ಶಾಸಕರಾಗಿ ಉನ್ನತ ಸ್ಥಾನ ಅಲಂಕರಿಸಬೇಕು. ಈ ರಾಜ್ಯದ ಸಚಿವರಾಗಬೇಕು ಎಂದು ಅಭಿಮಾನಿ ಬಳಗದ ವತಿಯಿಂದ ಹಾರೈಸಲಾಯಿತು.
ಕೊರಟಗೆರೆ ಜನತೆಯ ಆಶೀರ್ವಾದದಿಂದ ಜಿ.ಪಂ ಅಧ್ಯಕ್ಷೆಯಾಗಿ ಜನರ ಕಷ್ಟಗಳಿಗೆ ಸ್ಪಂದಿಸಿರುವೇ, ನಿಮ್ಮಲರ ಸಹಕಾರ ಹೀಗೆ ನಮ್ಮ ಮೇಲಿರಲಿ. ಇನ್ನೊಮ್ಮೆ ಅವಕಾಶ ಸಿಕ್ಕರೆ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುವೆ. ನಿಮ್ಮ ನೆಚ್ಚಿನ ಕಾಂಗ್ರೆಸ್ ಮುಖಂಡರಾದ ಮಹಾಲಿಂಗಪ್ಪ ರವರಿಗೆ ಹೀಗೆ ಇನ್ನೂ ಹೆಚ್ಚಿನ ಆಶೀರ್ವಾದ ಮಾಡುವ ಮೂಲಕ ಬಡಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಶ್ರೀಮತಿ ಪ್ರೇಮಾಮಹಾಲಿಂಗಪ್ಪ, ಮಾಜಿ ಜಿ.ಪಂ ಅಧ್ಯಕ್ಷೆ, ಕೊರಟಗೆರೆ ಇವರು ಆಶಿಸಿದರು.
ಇದೇ ಸಂದರ್ಭದಲ್ಲಿ ಟಿಎಪಿಎಂ ಎಸ್ ಅಧ್ಯಕ್ಷ ಜಿ.ಎಂ ಶಿವಾನಂದ, ವಿಎಸ್ಎಸ್ಎನ್ ವಿನಯ್ ಕುಮಾರ್, ಕಾಂಗ್ರೇಸ್ ಮುಖಂಡರಾದ ನಾರಾಯಣ್(ಚಿಕ್ಕಿ), ನಾಗೇಶ್,
ಸಿದ್ದಗಂಗಯ್ಯ, ರಂಗನಾಥ್, ತಾರೇಶ್, ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.