ಗುಬ್ಬಿ: ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದರು. ಸಹ ರಾಜ್ಯ ಸರ್ಕಾರ ಮೀನ ಮೇಷ ತೋರುತ್ತಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ದಿನಾಂಕ 28-10- 2024ರಂದು ತುಮಕೂರಿನಲ್ಲಿ ತಮಟೆ ಚಳವಳಿಯನ್ನು ಹಮ್ಮಿಕೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ತಾಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ, ತುಮಕೂರಿನಲ್ಲಿ ನಡೆಯುವ ತಮಟೆ ಚಳುವಳಿಗೆ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮೊದಲು ಗುಬ್ಬಿ ಪಟ್ಟಣದಲ್ಲಿ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ನಂತರ ತುಮಕೂರಿಗೆ ತೆರಳಲಾಗುವುದು. ಸಮುದಾಯದ ಜನರು ಬೆಳಿಗ್ಗೆ 10 ಗಂಟೆಗೆ ಭಾಗವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಸಮಿತಿಯ ಅದಲಗೆರೆ ಈಶ್ವರಯ್ಯ ಮಾತನಾಡಿ, ಮಾದಿಗ ಜನಾಂಗದ ಮೂವತ್ತು ವರ್ಷಗಳ ಹೋರಾಟಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಫಲ ನೀಡಬೇಕು. ಈ ಒಂದು ಹೋರಾಟಕ್ಕೆ ಎಚ್ಚೆತ್ತುಕೊಳ್ಳದೆ. ಹೋದರೆ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾದಲಪುರ ಲೋಕೇಶ್, ಕುಂದರನಹಳ್ಳಿ ನಟರಾಜು, ಕೋಟೆ ಕಲ್ಲೇಶ್, ಹೊಸಹಳ್ಳಿ ರವೀಶ್ ಮತ್ತು ಮಹೇಶ್, ದೇವರಾಜ್ ಮಡೇನಹಳ್ಳಿ, ಕೋಣನಕೆರೆ ಸಂತೋಷ್, ಗ್ಯಾರಹಳ್ಳಿ ಯೋಗೇಶ್, ಶಿವಸ್ವಾಮಿ, ತೊಗರಿ ಘಟ್ಟ ರಂಗಸ್ವಾಮಿ, ಲೋಕೇಶ್ ಕೆ.ಮತ್ತಿಘಟ, ರಾಮು, ಕುಮಾರ್ ಪೆದ್ದನಹಳ್ಳಿ, ಸೇರಿದಂತೆ ಇನ್ನಿತರರು ಇದ್ದರು.