ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಕ್ಟೋಬರ್ 29ರಂದು ಜಿಲ್ಲೆಯ 9 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಈ ಅದಾಲತ್‌ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ 29ರಂದು ಜಿಲ್ಲೆಯ ಶಿರಾ ತಾಲೂಕಿನ ಗೋಪಾಲದೇವರಹಳ್ಳಿ; ತುರುವೇಕೆರೆ ತಾಲೂಕಿನ ಆನೆಕೆರೆ; ತಿಪಟೂರು ತಾಲೂಕಿನ ಕುಪ್ಪಾಳು; ಮಧುಗಿರಿ ತಾಲೂಕಿನ ಬ್ರಹ್ಮಸಮುದ್ರ; ತುಮಕೂರು ತಾಲೂಕಿನ ಬಳ್ಳಗೆರೆ; ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ; ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ; ಪಾವಗಡ ತಾಲೂಕಿನ ನಾಗಲಮಡಿಕೆ; ಗುಬ್ಬಿ ತಾಲೂಕಿನ ಅಡಗೂರು ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್‌ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ.