ಗುಬ್ಬಿ| ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ; ಸ್ಥಳ ಪರಿಶೀಲಿಸಿದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ

ಗುಬ್ಬಿ: ಪಟ್ಟಣದ ನಾಗರಿಕರ ಮನವಿ ಮೇರೆಗೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಲು ಹಾಗೂ ಅತ್ಯವಶ್ಯ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಶೀಘ್ರದಲ್ಲಿ ಎಲ್ಲಾ ಬೇಡಿಕೆಗೆ ಅನುಗುಣವಾಗಿ ಅಭಿವೃದ್ದಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಂಜೆ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಕಾಮಗಾರಿ ವೀಕ್ಷಿಸಿ ನಂತರ ಗುಬ್ಬಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅತ್ಯಾಧುನಿಕ ನಿಲ್ದಾಣ ಮರು ನಿರ್ಮಾಣ ಮಾಡಲು ಉನ್ನತೀಕರಣಕ್ಕಾಗಿಯೇ ವಿಶೇಷ ಅನುದಾನ ಅಂದಾಜು 35 ಕೋಟಿ ವ್ಯಯ ಮಾಡಿ ನಿಲ್ದಾಣಕ್ಕೆ ಶ್ರೀ ಚನ್ನಬಸವೇಶ್ವರ ಸ್ವಾಮಿ ಹೆಸರು ನಾಮಕರಣ ಮಾಡುವುದಾಗಿ ತಿಳಿಸಿದರು.

ಪಟ್ಟಣದಿಂದ ಚೇಳೂರು ರಸ್ತೆ ಮಾರ್ಗ ಸೇರಲು ಅಂಡರ್ ಪಾಸ್ ರಸ್ತೆ ನಾಗರೀಕರ ಶಾಪಕ್ಕೆ ಗುರಿಯಾಗಿತ್ತು. ಈ ಹಿನ್ನಲೆ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೆ. ರೈಲ್ವೆ ಬೋರ್ಡ್ ಅಧಿಕಾರಿಗಳು ನಿಯಮಾನುಸಾರ 5.5 ಮೀಟರ್ ರಸ್ತೆಗೆ ನಕ್ಷೆ ತಯಾರಿಸಿದ್ದಾರೆ. ಆದರೆ ಸಾರ್ವಜನಿಕರ ಹಿತಕ್ಕೆ 7.5 ಮೀಟರ್ ರಸ್ತೆ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದು ವರ್ಷದಲ್ಲಿ ಈ ಕೆಲಸ ಪೂರ್ಣ ಮಾಡಿಕೊಡುವ ಭರವಸೆ ನೀಡಿದರು.

ನಾಲ್ಕು ತಿಂಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಧಾನಮಂತ್ರಿ ರೋಜಗಾರ್ ಯೋಜನೆಯಡಿ ಕೆಲಸಗಳು ಜಿಲ್ಲೆಯಲ್ಲಿ ನಡೆಸುತ್ತೇನೆ. ಹೆದ್ದಾರಿ ಅಭಿವೃದ್ಧಿ ಬಗ್ಗೆ ಕೇಂದ್ರದಲ್ಲಿ ಗಟ್ಕರಿ ಅವರೊಂದಿಗೆ ಚರ್ಚಿಸುತ್ತೇನೆ. ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ ಮೀಸಲಿನ ಅನುದಾನ ಬಳಕೆ ಹಾಗೂ ನರೇಗಾ ಯೋಜನೆ ಹೀಗೆ ಎಲ್ಲಾ ಅನುದಾನ ಬಳಕೆ ಮಾಡಿ ವರ್ಷದಲ್ಲಿ ನನ್ನ ಹೆಜ್ಜೆ ಗುರುತು ಕೆಲಸದ ಮೂಲಕ ಲೆಕ್ಕ ನೀಡುತ್ತೇನೆ ಎಂದ ಅವರು ಸ್ಥಳೀಯ ತೊರೇಹಳ್ಳಿ ಗ್ರಾಮದ ಅಣೆ ರಸ್ತೆಗೆ ಅವಶ್ಯ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅರ್ಜಿ ಬಂದಿದೆ. ಈ ಕಾರ್ಯ ಕೂಡಾ ಶೀಘ್ರ ಮಾಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ಎಸ್. ಡಿ.ದಿಲೀಪ್ ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಬಿ.ಎಸ್.ನಾಗರಾಜು, ಪಿ.ಬಿ.ಚಂದ್ರಶೇಖರ್ ಬಾಬು, ಎನ್.ಸಿ.ಪ್ರಕಾಶ್, ಜಿ.ಆರ್.ಶಿವಕುಮಾರ್, ಹಿತೇಶ್, ಸುರೇಶ್ ಗೌಡ, ರೈಲ್ವೆ ಉನ್ನತ ಅಧಿಕಾರಿಗಳಾದ ತ್ರಿನೇತ್ರ, ರಾಜುಶರ್ಮ, ಹರೀಶ್ ಗುಪ್ತಾ, ಗುಲ್ ಅಶ್ರಫ್ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles