ಶಿರಾ: ರಾಜ್ಯಾದ್ಯಂತ ರಾಜ್ಯದ ವಿಶ್ವಕರ್ಮರ ಹಾಗೂ ಅದರ ಉಪ ಜಾತಿಗಳ ಸ್ಥಿತಿ ಗತಿಗಳ ಸಂಶೋಧನೆ ನಡೆಸಲು ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಶೋಧನಾ ಸಂಸ್ಥೆಯಿಂದ ಅಧಿಕಾರಿಗಳು ನ. 9 ರಂದು ತುಮಕೂರಿನ ಕೈದಾಳ ಗ್ರಾಮದ ಶ್ರೀ ಚನ್ನಕೇಶ್ ದೇವಾಲಯಕ್ಕೆ ಆಗಮಿಸುತ್ತಿದ್ದು, ಅಂದು ವಿಶ್ವಕರ್ಮ ಜನಾಂಗದವರು ಆಗಮಿಸಿ ಹೆಚ್ಚಿನ ಮಾಹಿತಿ ನೀಡಬೇಕೆಂದು ವಿಶ್ವಕರ್ಮ ಮುಖಂಡ ಎಸ್.ಜಿ.ರುದ್ರಾಚಾರ್ ತಿಳಿಸಿದ್ದಾರೆ.
ರಾಜ್ಯ ಸರಕಾರದ ವತಿಯಿಂದ ವಿಶ್ವಕರ್ಮರ ಕುಲಶಾಸ್ತ್ರೀಯ ಅದ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಹೊರಗುಳುಯುವಿಕೆ ಮತ್ತು ಒಳಗುಳುಯುವಿಕೆ ನೀತಿ ಅದ್ಯಯನ ತಂಡವು ತುಮಕೂರು ಜಿಲ್ಲೆಯ ತುಮಕೂರು ಟೌನ್ ಕೈದಾಳ ಗ್ರಾಮದ ದೇವ ಶಿಲ್ಪಿ ಜಕಣಾಚಾರಿ ನಿರ್ಮಾಣ ಮಾಡಿರುವ ಶ್ರೀ ಚನ್ನಕೇಶವ ದೇವಲಯಾದ ಆವರಣದಲ್ಲಿ ವಿಶ್ವಕರ್ಮರ 41 ಉಪ ಜಾತಿಗಳ ಅದ್ಯಯನ ತಂಡದ ಪ್ರೊ.ಡಿ.ಸಿ ನಂಜುಡ ಆಯೋಗ ರಚನೆಯಾಗಿದ್ದು, ಎಂ. ಮಹಾದೇವ ಮತ್ತು ಕೃಷ್ಣ ಮೂರ್ತಿ ರವರು ಬೇಟಿ ನೀಡಲಿದ್ದಾರೆ. ಎಲ್ಲಾ ವಿಶ್ವಕರ್ಮ ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶ್ವಕರ್ಮರ ಸ್ಥಿತಿಗಳ ಅದ್ಯಯನ ತಂಡಕ್ಕೆ ಮಾಹಿತಿ ಕೊಟ್ಟು ವಿಶ್ವಕರ್ಮರ ಮುಂದಿನ ತಲೆಮಾರಿಗೆ ಸರಕಾರದಲ್ಲಿ ದಾಖಲೆ ಮಾಡಿಸಿ ಉಳಿಸೊಡಲು ಹಾಗೂ ಇತರೆ ಹಿಂದುಳಿದ ವರ್ಗಗಳ ಓ.ಬಿ.ಸಿ ರಾಜ್ಯ ಸರಕಾರ ಮತ್ತು ಭಾರತ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅನುಕೂಲವಾಗಲಿದ್ದು, ವಿಶ್ವಕರ್ಮರು ಸಹಕಾರಿಸಲು ಮನವಿ ಮಾಡಿದ್ದಾರೆ.