ಪಾಲಿಕೆ ಆಯುಕ್ತರಿಂದ ಮಹತ್ವದ ನಿರ್ಧಾರ | ಪ್ಲಾಸ್ಟಿಕ್‌ ಬಳಸಿದರೆ ನಿಮಗೂ ಬೀಳಲಿದೆ ದಂಡ

ತುಮಕೂರು: ಕರ್ನಾಟಕ ರಾಜ್ಯ ವಾಯು ಮಾಲಿನ್ಯ ಮಂಡಳಿ ಹೊರಡಿಸಿರುವ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಸ್ಟರಿನ್ ಮತ್ತು ವಿಸ್ತರಿತ ಪಾಲಿಸ್ಟರಿನ್ ಸೇರಿದಂತೆ ವಿವಿಧ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ತಿಳಿಸಿದ್ದಾರೆ.

ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ನಗರ ವ್ಯಾಪ್ತಿಯ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿ, ಅಂಗಡಿ ಮಾಲೀಕರು, ಇ-ಕಾಮರ್ಸ್ ಕಂಪನಿ, ಬೀದಿ ವ್ಯಾಪಾರಿ, ವಾಣಿಜ್ಯ ಸಂಸ್ಥೆ (ಮಾಲ್‌ಗಳು, ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರ), ಸಿನಿಮಾ ಮನೆ, ಪ್ರವಾಸೋದ್ಯಮ ಸ್ಥಳ, ಶಾಲೆ/ಕಾಲೇಜು, ಕಚೇರಿ ಸಂಕೀರ್ಣ/ಆಸ್ಪತ್ರೆ, ಇತರೆ ಸಂಸ್ಥೆಗಳು ನಿಯಮವನ್ನು ಪಾಲಿಸದಿರುವುದು ಪಾಲಿಕೆ ಗಮನಕ್ಕೆ ಬಂದಿದೆ. ನಗರ ವ್ಯಾಪ್ತಿಯಲ್ಲಿರುವ ಹಲವು ಹೊಟೇಲ್ ಹಾಗೂ ರಸ್ತೆ ಬದಿ ವ್ಯಾಪಾರಿಗಳು ಇಡ್ಲಿ ತಯಾರಿಸಲು/ಆಹಾರ ವಿತರಿಸುವ ಪ್ಲೇಟ್ ಮೇಲೆ/ಸಾಂಬರ್/ಚಟ್ನಿ-ಸಾಗು ಪಾರ್ಸಲ್ ನೀಡಲು ನಿಷೇಧಿತ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವ; ಕಾಫಿ-ಟೀ, ಪಾನೀಯಗಳನ್ನು ಪಾರ್ಸಲ್ ನೀಡಲು ಸಿಲ್ವರ್ ಕೋಟೆಡ್ ಪ್ಲಾಸ್ಟಿಕ್ ಕವರ್ ಥರ್ಮೋಕೋಲ್ ಬಟ್ಟಲು/ಪ್ಲೇಟ್, ಸಿಲ್ವರ್ ಕೋಟೆಡ್ ಶೀಟ್ಸ್ ಹೊಂದಿರುವ ಜೊನ್ನೆ, ಪೇಪರ್ ಪ್ಲೇಟ್, ತಟ್ಟೆ ಇತ್ಯಾದಿಗಳನ್ನು ಬಳಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿರುವುದರಿಂದ ಈ ವಸ್ತುಗಳನ್ನು ಬಳಸದಂತೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್, ಪ್ಲಾಸ್ಟಿಕ್ ಧ್ವಜ/ಕ್ಯಾಂಡಿ ಸ್ಟಿಕ್/ ಐಸ್‌ಕ್ರೀಂ ಸ್ಟಿಕ್/ ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟರಿನ್ (ಥರ್ಮೋಕೋಲ್)/ಪ್ಲೇಟ್/ಕಪ್/ಲೋಟ/ಫರ‍್ಕ್/ ಚಮಚ/ ಚಾಕು/ ಟ್ರೇಗಳಂತಹ ಪ್ಲಾಸ್ಟಿಕ್ ಕಟ್ಲರಿ, ಸ್ವೀಟ್ ಬಾಕ್ಸ್ಗಳ ಸುತ್ತ ಸುತ್ತುವ ಪ್ಲಾಸ್ಟಿಕ್ ಫಿಲ್ಮ್, ಆಮಂತ್ರಣ ಪತ್ರ ಹಾಗೂ ಸಿಗರೇಟ್ ಪ್ಯಾಕೇಟ್, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್/ಪ್ಲಾಸ್ಟಿಕ್ ಸ್ಟಿಕ್ಕರ್‌ಗಳ ಉತ್ಪಾದನೆ/ಆಮದು/ಸಂಗ್ರಹಣೆ/ವಿತರಣೆ/ಮಾರಾಟ/ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ ದಂಡ ವಿಧಿಸಿ ಉದ್ದಿಮೆ ರಹದಾರಿಯನ್ನು ರದ್ದುಪಡಿಸಿ ಕಾನೂನು ರೀತ್ಯಾ ಕ್ರಮವಹಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles